ಚಾರಣ ಸಿಹಿ ಯಾನ

ಇಂದು ನಮ್ಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.ಎಲ್ಲರೂ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ  ಚಾರಣಕ್ಕೆ ತಯಾರಾಗಿ ಬಂದಿದ್ದರು. ಅಂದುಕೊಂಡಂತೆ ಸರಿಯಾಗಿ 9:30 ರ ವೇಳೆಗೆ  ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಹತ್ತಲು ಹೋರಟೆವು.10:30 ರ ವೇಳೆಗೆ  ತಲುಪಿ ಬೆಟ್ಟ ಹತ್ತಲು ಪ್ರಾರಂಭ ಮಾಡಿದೆವು.ಶಿಕ್ಷಕರಾದಿಯಾಗಿ  ‌‌ಬೆಟ್ಟ ಹತ್ತಿದವರಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಪ್ರಶಸ್ತಿ ಕೊಡುವದರಿಂದ ಎಲ್ಲರೂ ನಾ ಮುಂದು ತಾ ಮುಂದು ಎಂದು ಬೆಟ್ಟದ ತುದಿ ತಲುಪುವದರೊಳಗೆ ಸುಸ್ತೋ ಸುಸ್ತು.ಸಾಕಪ್ಪಾ ಬೆಟ್ಟದ ಸಹವಾಸ ಅಂತ ಮನಸ್ಸಲ್ಲಿ ಅಂದುಕೊಂಡು ಹೇಗೊ ಎಲ್ಲರು ಬೆಟ್ಟದ ತುದಿ ತಲುಪಿ ಮಲ್ಲಿಕಾರ್ಜುನ ಸ್ವಾಮಿಯ ಆಶಿವಾ೯ದ ಪಡೆದೆವು. ಅಲ್ಲಿಯೇ ಕುಳಿತು ಅಂತ್ಯಕ್ಷರಿ ಹಾಡಿನ ಕಾಯ೯ಕ್ರಮ ಮಾಡಿ,
ಕುಣಿದು ಕುಪ್ಪಳಿಸಿದೆವು.ನಂತರ ಬೆಟ್ಟದ ಕೆಳಗೆ ಬಂದು ಮನೆಯಿಂದ ತಗೆದುಕೊಂಡು ಹೋದ ತಿಂಡಿಯನ್ನು ತಿಂದು ಬೆಟ್ಟ ಹತ್ತಿದ ಕ್ಷಣಗಳನ್ನು ಮೆಲಕು ಹಾಕುತ್ತಾ ನಮ್ಮೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ಮಕ್ಕಳೊಂದಿಗೆ ಬೆಟ್ಟ ಹತ್ತುತ್ತಿರುವ ಪಿ.ಮಹೇಶ್ ಸರ್
ವಯಸ್ಸು 40 ದಾಟಿದರೂ ಇನ್ನೂ 20 ರ ಉತ್ಸಾಹಿಗಳಾದ ನಮ್ಮ ಉಪಪ್ರಾಂಶುಪಾಲರು.
ಮಕ್ಕಳೊಂದಿಗೆ RJ sir & SBS sir
KMS sir,SBS sir&VP sir
ಮಲ್ಲಿಕಾರ್ಜುನ ಸ್ವಾಮಿ ದಶ೯ನ

KMS sir&PM sir

ಮಕ್ಕಳೊಂದಿಗೆ PM sir

ಬೆಟ್ಟದ ತುದಿಯಲ್ಲಿ

ಅಂತ್ಯಕ್ಷರಿ ಕಾಯ೯ಕ್ರಮ

                    ಬೆಟ್ಟದಲ್ಲಿ ಸ್ವಚ್ಛತಾ ಕಾಯ೯
                   ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು