ಕ್ಲಸ್ಟರ್ ಸ್ಟಾರ್

ಕ್ರೀಡಾಬೆಳಕು
ಅಂದು 30/07/2010. ನಮ್ ಶಾಲೇಲಿ ಹಬ್ಬ. ಅದು ಕ್ರೀಡಾಹಬ್ಬ. 2  ದಿನ ನಡಿತು. ಪಕ್ಕದ ಸ್ವಾಮಿ ಯೋಗಿನಾರೇಯಣ ಪ್ರೌಢಶಾಲೆ ವಹಿಸಿಕೊಂಡಿದ್ದ ಕ್ಲಸ್ಟರ್ ಲೆವೆಲ್ ಕ್ರೀಡಾಕೂಟ ಅದು. ಜಿಲ್ಲೆಯಲ್ಲೇ ದೊಡ್ಡದಾದ ನಮ್ ಮೈದಾನದಲ್ಲಿ ನಡಿಯಿತು. ಶಾಲೆಗೆ ಶಾಲೆಯೇ ಚಿಲಿಪಿಲಿ ಅಂತಿತ್ತು. ಸುತ್ತಮುತ್ತಲ ಕಿತ್ತೂರು, ಮಾಕೋಡು, ಹಂಡಿತವಳ್ಳಿ ಹೈಸ್ಕೂಲ್ ಹೈಕ್ಳೆಲ್ಲಾ ಹೈಕ್ಲಾಸ್ ಆಗಿ ಮಿಂಚ್ತಿದ್ರು.
  

ನಡೆಮುಂದೆ ನಡೆಮುಂದೆ...
ಈ ಮೈ'ದಾನ'ವನ್ನು ದಾನವಾಗಿ ನೀಡಿದ, ನನ್ನ ಹಿತೈಷಿಗಳು ಆದ ವಿಶ್ವನಾಥ್ ದಂಪತಿಗಳು ಅಂಗಳಕ್ಕೆ ಬಂದಿದ್ರು. ನಮ್ಮ ವೈಸ್ ಪ್ರಿನ್ಸಿಪಾಲ್ ಪ್ರಶಾಂತ್ ಎಂ.ಸಿ.ರವರು ಅವರನ್ನ ಕಂಡು ಸಂತಸಗೊಂಡ್ರು. ಆತ್ಮೀಯವಾಗಿ ಬರಮಾಡಿಕೊಂಡರು. ಒಂದಷ್ಟು ಶಾಲೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ರು. ನಂತರ ನಮ್ ಕಾಲೇಜ್ ಪ್ರಿನ್ಸಿಪಾಲ್ ವೈಕುಂಠಪ್ಪನವರು, ವೈಸ್ ಪ್ರಿನ್ಸಿಪಾಲ್ ರು,  ಜಿಲ್ಲಾ ಪಂಚಾಯ್ತಿ ಸದಸ್ಯೆ ಹೇಮಾವತಿ ಶಿವಕುಮಾರ್, ಗ್ರಾಮಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ, ಎಸ್ ಡಿ ಎಂ ಸಿ ಸದಸ್ಯರು ಸೇರಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಧ್ವಜವಂದನೆ ಸ್ವೀಕರಿಸಿದರು.


ರಂಗೇರಿದ ಕ್ರೀಡಾಕಣ
                                                         

ಶಿಸ್ತಿನ ಸಿಪಾಯಿಗಳಂತೆ ಮಕ್ಕಳೆಲ್ಲಾ ಹೆಜ್ಜೆ ಹಾಕಿದ್ರು. ಅದರಲ್ಲೂ ನಮ್ ಶಾಲೆ ಮಕ್ಕಳು ಉತ್ತಮ ಧ್ವಜವಂದನೆ ಸಲ್ಲಿಸಿದ್ದಕ್ಕೆ ಮೊದಲ ಬಹುಮಾನ ಪಡೆದರು. ಶಾಲೆಗೆ ಸೇರಿ ಆಗಸ್ಟೇ ವಾರ ಕಳೆದಿದ್ದ ನಮ್ ಉಪಪ್ರಾಂಶುಪಾಲರಿಗೆ ಹಿರಿಹಿರಿ ಹಿಗ್ಗಿ.



ಛಲಬೇಕು..ಗೆಲ್ಲಬೇಕು...
ನಂತರ ವಿವಿಧ ವಿಭಾಗಗಳಲ್ಲಿ ಆಟೋಟಗಳು ನಡೆದವು. ವಾಲಿಬಾಲ್ ಪಂದ್ಯಾವಳಿಯ
ಫೈನಲ್ ಮ್ಯಾಚ್ ಅಂತೂ ಕಡೆಗೆ `
ನಮ್ ಇಸ್ಕೂಲು' ಮತ್ತು ಮಾಕೋಡು
ಹೈಸ್ಕೂಲು ನಡುವೆ ಏರ್ಪಟ್ಟಿತ್ತು. 
ಆಗಸ್ಟೇ ಚಿಗುರಿದ ಸ್ನೇಹಿತರಾಗಿದ್ದ
ಮಾಕೋಡು ಹೆಡ್ ಮಾಸ್ಟರ್
ತಮ್ಮಯ್ಯ ಅವರು ಮತ್ತು
ಹಂಡಿತವಳ್ಳಿ ಹೆಡ್ ಮಿಸ್ಟ್ರಸ್ ಮತ್ತು
ಹಸ್ತಲಾಘವ
ನಮ್ ವೈಸ್ ಪ್ರಿನ್ಸಿಪಾಲ್ ರ
ಅಕ್ಕನವರೂ ಆದ ಶಶಿಕಲಾರವರು
ಫೈನಲ್ ಮ್ಯಾಚ್ ನೋಡಿದ್ರು.
ಕಡೆಗೆ ಮಾಕೋಡು ವಿನ್ ಆಯ್ತು.


ಆದರೆ, ಕಡೆಗೆ ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿ ಚಾಂಪಿಯನ್ ಆಗಿದ್ದು ನಮ್ಮ ಶಾಲೆಯೇನೆ. ನಮ್ಮ ಪಿಟಿ ಮೇಷ್ಟ್ರು ಮಹೇಶ್ ಅವರ ಶ್ರಮ ಫಲಿಸಿತು. ಹೊಸದಾಗಿ ಅಡಿಯಿಟ್ಟಿದ್ದ ವಿಪಿ ನಿಜಕ್ಕೂ ಹಿಗ್ಗಿಹೋಗಿದ್ರು. ಶಾಲೆಯ ಎಲ್ಲಾ ಸಹಶಿಕ್ಷಕ, ಶಿಕ್ಷಕಿಯರು ಕೂಡ ಈ ಸಂಭ್ರಮದ ಪಾಲುದಾರರಾದ್ರು. ನಂತರವೆಲ್ಲಾ ಸವಿ ಸವಿ ನೆನಪುಗಳ ಮೆರವಣಿಗೆ. ಜೊತೆ ಜೊತೆಗೆ ಎಸ್.ವೈ.ಎನ್ ಶಾಲೆಯವರು ಏರ್ಪಡಿಸಿದ್ದ ಭೂರಿಭೋಜನ. ಮಕ್ಕಳೊಂದಿಗೆ ಶಿಕ್ಷಕರೂ ಸವಿದರು. 

ಕ್ಲಸ್ಟರ್ ಸ್ಟಾರ್


 .

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು