ನಮ್ ಸ್ಕೂಲ್ ಗಣೇಶ
![]() |
ನಮ್ ಸ್ಕೂಲ್ ಗಣೇಶ |
ಮುಂಗಾರಿನ ಅಭಿಷೇಕ
ವಿಜೃಂಭಿಸಿದ ವಿನಾಯಕ
ಮಕ್ಕಳೆಲ್ಲಾ ಲಕ ಲಕ
ಆನಂದಿಸಿತು ಅಕ್ಷರಲೋಕ
ಅತ್ತ ತುಂತುರು ಮಳೆ. ಇತ್ತ ಕಂಗೊಳಿಸುತ್ತಿದ್ದ ಶಾಲೆ. ಮಿರಿ ಮಿರಿ ಮಿಂಚುತ್ತಿದ್ದ ಬಾಲೆ. ನನ್ನಂಗಳದಲ್ಲಿ ಇವತ್ತು ಸಂಭ್ರಮವೋ ಸಂಭ್ರಮ. ಅಂದು ದೇಶವನ್ನು ಒಗ್ಗೂಡಿಸಲು ತಿಲಕರು ಹುಟ್ಟುಹಾಕಿದ ಗಣೇಶೋತ್ಸವ ಕಳೆಕಟ್ಟಿತ್ತು. ಮಕ್ಕಳೆಲ್ಲಾ ಬಣ್ಣ ಬಣ್ಣದ ಬಟ್ಟೆ ತೊಟ್ಟು ರಂಗಾಗಿದ್ದರು. ಉಪಪ್ರಾಂಶುಪಾಲರಾದ ಪ್ರಶಾಂತ್ ಎಂ.ಸಿ, ಸಹಶಿಕ್ಷಕರಾದ ಮಹದೇವಯ್ಯ, ಜನಾರ್ಧನ್, ಉಮೇಶ್, ಶಿವರಾಮು, ಶಾರದಾ, ಪುಷ್ಪಲತಾ ಎಲ್ಲರೂ ಹಬ್ಬದಲ್ಲಿ ಮಿಂದೆದ್ದರು.
![]() |
ಮೆರವಣಿಗೆ |
ಅಂತೂ ಆ ಜಿನುಜಿನುಗೋ ಜೇನ ಹನಿಯಂತ ಮಳೆಯಲ್ಲೇ ನಮ್ಮ ಗಣೇಶೋತ್ಸವ ಆರಂಭವಾಯಿತು. ನಮ್ ಶಾಲೆಯಿಂದ ಊರು ಆನತಿ ದೂರದಲ್ಲಿದೆ. ಹೀಗಾಗಿ, ಊರೊಳಗೆ ಪಯಣ ಶುರುವಾಯಿತು. ಸಾಲು ಸಾಲು ಮಕ್ಕಳ ಮೆರವಣಿಗೆ ಗಣೇಶನ ಜೊತೆ ಶುರುವಾಯಿತು.
ಕಡೆಗೆ ಊರೊಳಗೆ ಮೆರವಣಿಗೆ ಬಂತು. ಅಂಗಡಿ ಮಾಲೀಕರೆಲ್ಲ ಗಣೇಶನಿಗೆ ನಮಿಸಿದರು. ಊರೊಳಗೆ ಹೋಗುತ್ತಿದ್ದಂತೆ ಹಲವರು ಸಾಥ್ ನೀಡಿದರು. ಗ್ರಾಮಸ್ಥರು ಮಕ್ಕಳ ಜೊತೆ ಮಕ್ಕಳಾದರು. ತಾವೂ ಮಕ್ಕಳ ಜೊತೆಗೂಡಿ ಕುಣಿದು ಕುಪ್ಪಳಿಸಿದರು.![]() |
ರಾವಂದೂರು ಸರ್ಕಲ್ |
![]() |
ಮೂಷಿಕವಾಹನನ ಮುಂದೆ ಕುಣಿತ |
![]() |
ಮಳೆ ಗಣಪನಿಗೆ ಕಳೆ |
ಇನ್ನು ಶಿಕ್ಷಕರಾದ ಉಮೇಶ್ ಅಂತೂ ಎಲ್ಲರ ಮಧ್ಯೆ ಹಾವು ಬಿಟ್ಟರು. ಅಂದರೆ, ನಾಗರಹಾವಿನ ಸ್ಟೈಲ್ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು.
![]() |
ನಾಗರಹಾವಿನ ನೃತ್ಯ |
ಕಡೆಗೆ ಕೆರೆಯತ್ತ ಹೊರಟಿತು ಪಯಣ. ರಾವಂದೂರಿನ ಸಂತೆ ಮೈದಾನದ ಬಳಿ ಎಲ್ಲರೂ ಜಮಾಯಿಸಿದರು. ಕರೆ ಕಟ್ಟೆಯಲ್ಲಿ ಎಲ್ಲರೂ ಜೈಕಾರ ಕೂಗಿದರು. ಗಣೇಶ ಬಂದ...ಕಾಯಿಕಡುಬು ತಿಂದ....ಚಿಕ್ಕೆರೆಲಿ ಬಿದ್ದ....ದೊಡ್ಡಕೆರೆಲಿ ಎದ್ದ....ಮೊಳಗಿತು.
![]() |
ವಿದ್ಯಾ-ರ್ಥಿನಿಯರು |
ಗಣಪತ್ತೀಕಿ ಜೈ....
ಹಬ್ಬ, ಹಲವು ವಿಶೇಷಗಳ ಪ್ರತೀಕ. ಅಂದು ತಿಲಕರು ದೇಶ ಒಗ್ಗೂಡಿಸಲು ಆರಂಭಿಸಿದ ಈ ಉತ್ಸವ ಇಂದು ದೇಶಕ್ಕೆ ದೇಶವನ್ನೇ ಸಂಭ್ರಮದ ಅಲೆಯಲ್ಲಿ ತೇಲಿಸುತ್ತೆ. ಈ ಸಂಭ್ರಮ ಹೀಗೆ ಇರಲಿ. ಎಲ್ಲೆಲ್ಲೂ ಹಸಿರು ಕಂಗೊಳಿಸಲಿ. ಎಲ್ಲರಿಗೂ ಶುಭವಾಗಲಿ.
- ನಿಮ್ಮ ಪ್ರೀತಿಯ ರಾವಂದೂರು ಹೈಸ್ಕೂಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ