ಶಿಕ್ಷಕರ ದಿನಾಚರಣೆ

05/09/11. ಹಿಂದಿನ ದಿನದ ಸಂಜೆ. ಅಂದ್ರೆ, 04/09/11. ಬಿಇಓ ಕಚೇರಿಯಿಂದ ಉಪಪ್ರಾಂಶುಪಾಲರಿಗೆ ಕರೆ ಬಂತು. ''ನಿಮ್ಮ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ಬಂದಿದೆ. ನಾಳೆ ಸಮಾರಂಭದಲ್ಲಿ ಕೊಡ್ತಾರೆ. ಬನ್ನಿ. '' ಅಂತ. ಕರೆ ಯಾಕೆ ಬಂತು ಅನ್ನೋ ಚಿಂತೆ ಶುರುವಾಯಿತು. ಇವತ್ತಿನ ದಿನಗಳು, ಈ ಪ್ರಶಸ್ತಿಗಳು, ಅವುಗಳ ಮೌಲ್ಯ ?, ಕೊಡುವವರ ಶುದ್ಧತೆ,...ಇತ್ಯಾದಿ ಅದಕ್ಕೆ ಕಾರಣಗಳು. ಹೀಗಾಗಿ ಸಮಾರಂಭಕ್ಕೆ ಹೋಗುವುದೋ ? ಬೇಡವೋ ? ಪ್ರಶ್ನೆ ಎದುರಾಯಿತು. ಉಪಪ್ರಾಂಶುಪಾಲ ತನ್ನ ಅಕ್ಕನಿಗೆ ಕರೆ ಮಾಡಿದರು. ಅಭಿಪ್ರಾಯ ಕೇಳಿದರು. ಕಡೆಗೆ ಹೋಗುವ ನಿರ್ಧಾರ ಮಾಡಿದರು.

ಸಮಾರಂಭ ಶುರುವಾಗಿತ್ತು. ಗಂಟೆ 12 ಆಗಿತ್ತು. ಕಿಕ್ಕಿರಿದ ಸಭಾಂಗಣ. ವೇದಿಕೆ ಹತ್ತಿರದ ಬಾಗಿಲು ಸ್ವಾಗತಿಸಿದವು. ಮುಂಚೂಣಿಯಲ್ಲೇ ಕುಳಿತವು. ಹತ್ತಿರದಿಂದ ದೂರದವರನ್ನು ನೋಡುವ ಸೌ-ಭಾಗ್ಯ ಅದು. ಕೃಷ್ಣರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಧ್ಯಾಪಕಿಯವರು ಚರ್ವಿತ ಚರ್ವಣ ಭಾಷಣ ಮಾಡಿದರು. ನಂತರದ ಸರದಿ ತಹಸೀಲ್ದಾರ್ ಶೈಲಜ ಅವರದ್ದು. ಅವರ ನೆನಪಿನಂಗಳ, ಎಲ್ಲರನ್ನೂ ಎಚ್ಚರಿಸಿತು. ಬಳಿಕ ಪ್ರಶಸ್ತಿಗಳ ಸುರಿಮಳೆ.

ಮೊದಲಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ. ಬಳಿಕ ಉತ್ತಮ ಮುಖ್ಯೋಪಾಧ್ಯಾಯರಿಗೆ ಪ್ರಶಸ್ತಿ. ಹಾರ-ತುರಾಯಿ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ನೀಡಲಾಯಿತು.
ಬೆಸ್ಟ್ ಟೀಚರ್ಸ್
ಬೆಸ್ಟ್ ಟೀಚರ್ಸ್

ಕಡೆಗೆ ಆ ಕ್ಷಣ ಸಮೀಪಿಸಿತು. ಮೊಬೈಲ್ ತೆಗೆದುಕೊಂಡು ನಮ್ಮ ಶಾಲೆ ಶಿಕ್ಷಕರಿಗೆ ಉಪ್ರಾ ಮೆಸೆಜ್ ಮಾಡಿದರು. ಎಲ್ಲರೂ ಪ್ರಶಸ್ತಿ ಸ್ವೀಕರಿಸಲು ಬನ್ನಿ ಅಂತ. ಆದರೆ ದೈಶಿಶಿ ಮಹೇಶ್, ಸಂಶಿ ಎಂ.ಎಂ.ಮೇರ್ವಾಡೆ ಮಾತ್ರವೇ ಅಲ್ಲಿದ್ದರು. ಹೀಗಾಗಿ ಉಪಪ್ರಾಂಶುಪಾಲರಾದ ಪ್ರಶಾಂತ್ ಒಬ್ಬರೇ ವೇದಿಕೆ ಏರಿದರು.
ನಮ್ ಶಾಲೆ ನಂ.1

ಒಂದಷ್ಟು ಮುಜುಗರ, ಅಷ್ಟಷ್ಟು ಸ್ವಾಭಿಮಾನ, ಗಂಭೀರ ವದನರಾಗಿ ಎಲ್ಲರತ್ತ ವಾರಿನೋಟ ಬೀರಿದರು. ವೇದಿಕೆ ಅಲಂಕರಿಸಿದ್ದವರಿಗೆ ವಂದಿಸಿದರು. ಗಜಭಾರದ ಕಾರಣ ಮುಂದೆ ಬಂದು ಪ್ರಶಸ್ತಿ ಕೊಡಲೊಪ್ಪದ ಶಾಸಕ ಕೆ.ವೆಂಕಟೇಶ್ ಅವರು ಕುರ್ಚಿ ಹತ್ರವೇ ಪ್ರಶಸ್ತಿ ನೀಡಿದರು. ''ಇದು ನಿಮ್ಮ ಶಾಲೆಗೆ ಸೇರಿದ್ದು ಸರ್''. ಎಂದ್ರು ಪ್ರಶಾಂತ್. ಏಕೆಂದರೆ, ಪ್ರಸ್ತುತ ಶಾಲೆಯ ವಿದ್ಯಾರ್ಥಿಯಾಗಿದ್ದರು ಮಾನ್ಯ ಶಾಸಕರು. ಕಡೆಗೆ,  ''ಥಾಂಕ್ಸ್ '' ಎಂದ್ರು ಶಾಸಕರು. ಪ್ರಶಸ್ತಿ ಪಡೆದು, ಬಂದ ಕೆಲಸ ಮುಗಿಯಿತೆಂದು ಹೊರಡುವ ಮನಸಾಯಿತು. ಅಷ್ಟರಲ್ಲೇ ಸಭಾಂಗಣ ಉದರ ಪೋಷಣೆಗೆ ನಿಂತಿತ್ತು. ನೂಕುನುಗ್ಗಲಿನಲ್ಲಿ ಹೊಟ್ಟೆ ತುಂಬಿತು. ಹೆಜ್ಜೆ ಸಾಗಿತು. ಶಿಕ್ಷಕರ ದಿನದಂದೇ ಶಿಕ್ಷಕರ ದಿನಾಚರಣೆ ಮಾಡಿದ್ದು ಪ್ರಶಂಸನೀಯ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು