ಬರೆಯೋದಂದ್ರೆ, ಅದು ಪರೀಕ್ಷೆಯಲ್ಲಿ ಮಾತ್ರವಲ್ಲ. ನೋಟ್ಸ್ನಲ್ಲಿ ಮಾತ್ರವಲ್ಲ. ಬರೆಯುತ್ತಿರಬೇಕು. ಕತೆ-ಕವನ-ಒಗಟು-ಪ್ರಬಂಧ-..ಹೀಗೆ ನಮ್ ಮಕ್ಕಳೂ ಬರೆಯುತ್ತಿರಬೇಕೆನ್ನೋದು ನಮ್ ಆಸೆ. ಆ ಬರೆಯುವ ಕೈಗಳು ಚುರುಕಾಗಲಿ ಅನ್ನೋದು ನಮ್ ಬಯಕೆ. ಅಂತೆಯೇ ಶಾಲೆಯಲ್ಲೊಂದು "ತಿಂಗಳ ತೇರು" ಎಂಬ ಪುಟಾಣಿ ಕಿರಿಹೊತ್ತಿಗೆ ಆರಂಭವಾಯಿತು. ಆರ್ಥಿಕ ಬಿಕ್ಕಟ್ಟಿನಿಂದ ಅದು ಕುಂಟುತ್ತಾ ಸಾಗಿದೆ. ಅದು ಬೇರೆ ಮಾತು. ಆದರೆ ಮಕ್ಕಳ ಸೃಜನಶೀಲತೆ ಬೆಳಕಿಗೆ ತರೋಕೆ ಅಂತ ""ಕಾವ್ಯಕಮ್ಮಟ" ಮಾಡಬಕೆಂದು ಆಲೋಚಿಸಿದ್ವಿ. ಆದರೆ ಇದು ಈ ರೂಪದಲ್ಲಿ ಆರಂಭವಾಗಿದೆ. ಮನೆ ಮನೆ ಕವಿಗೋಷ್ಠಿಯ ರೂಪದಲ್ಲಿ. ಇದೇನಿದು ಶಾಲೆಯಲ್ಲಿ ಮನೆ ಮನೆ ಕವಿಗೋಷ್ಠಿ ಅಂತ ಅನ್ಕೋಬೇಡಿ. ಅಂದು ದಶಕಗಳಿಂದ ಪಿರಿಯಾಪಟ್ಟಣದ ದಾರಿಯಲ್ಲಿ ದೀಪ ಹಚ್ಚಿರುವ ಅರ್ಥಾತ್ "ದಾರಿದೀಪ" ಎಂಬ ದೇಸಿ ಪತ್ರಿಕೆ ತರುತ್ತಿರುವ ಸಂಪಾದಕರಾದ ಕಂಪ್ಲಾಪುರ ಮೋಹನ್ ರವರು ಜಿಲ್ಲೆಯ ಹಲವೆಡೆ ಮನೆ ಮನೆ ಕವಿಗೋಷ್ಠಿ ನಡೆಸಿ ಹೆಸರಾದವರು. ಅವರು ನಮ್ ಶಾಲೆಯಲ್ಲೊಮ್ಮೆ ಕವಿಗೋಷ್ಠಿ ಮತ್ತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಬೇಕೆಂದಿರುವುದಾಗಿ ತಿಳಿಸಿದರು. ಅದಕ್ಕೆ ನಮ್ ಪಕ್ಕದ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಮತ್ತು ನಮ್ಮ ಶಾಲೆ ಉಪಪ್ರಾಂಶುಪಾಲರಾದ ಪ್ರಶಾಂತ್ ರವರು ಹ್ಞೂಂಗುಟ್ಟಿದ್ದರು. ಅದು ಸಾರ್ಥಕವಾದ ದಿನ ಇದು 25/11/11. ಮಧ್ಹಾಹ್ನ ಸುಮಾರು 2 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು.
 |
ಮೊದಲ ಮಾತು |
ಕವಿಗೋಷ್ಟಿ ಜೊತೆಗೆ ರಸಪ್ರಶ್ನೆ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಪ್ರಚಲಿತ ಘಟನೆಗಳನ್ನಾಧರಿಸಿದ ಸ್ಪರ್ಧೆಯದು. ಮಧ್ಯಾಹ್ನದ ತಂಪುತಂಗಾಳಿಯ ತಿಲ್ಲಾನದ ಜೊತೆಗೆ ನಗುವಿನ ಕಚಗುಳಿ ಸೇರಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
 |
ರಸಪ್ರಶ್ನೆ ಬರೆಯುತ್ತಿರುವುದು
|
ಪ್ರಶ್ನೆಗಳು ನುಗ್ಗಿದವು. ಉತ್ತರಗಳು ಅತ್ತಿಂದ ನುಗ್ಗಿದ್ದವು. ಶುರುವಾಯಿತು ಯುದ್ಧ. ಕಲಿತ ಪಾಠ, ತಿಳಿದ ತಿಳುವಳಿಕೆ, ಎಲ್ಲವನ್ನೂ ಕರತಲಾಮಲಕ ಮಾಡಿ ನಮ್ ಮಕ್ಕಳು ಉತ್ತರ ಇತ್ತರು. ಇದರ ಮಧ್ಯೆ ಒಂದಷ್ಟು ಕಲೆಯ ಪಾಠ ನಡೆಯಿತು. ನಡೆಸಿಕೊಟ್ಟವರು ಸುವರ್ಣವಾಹಿನಿಯಲ್ಲಿ ಬರುವ
ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ಒಂದು ಸೈನಿಕನ ಪಾತ್ರದ ಮೂಲಕ ಹೆಸರು ಮಾಡಿರುವ ಸ್ಥಳೀಯರ ಕಲಾವಿದರಾದ ರಾಜಣ್ಣನವರು. ಒಂದು ಏಕಪಾತ್ರಾಭಿನಯದ ಮೂಲಕ ಮಕ್ಕಳ ಸೃಜನಶೀಲತೆಗೆ ಸ್ಫೂರ್ತಿಯಾದರು.
ಬಳಿಕ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿದ್ದ ನಾವೆಲ್ಲ ಮಕ್ಕಳಿಗೆ ಬಹುಮಾನ ನೀಡಿದೆವು.
 |
ರಸಪ್ರಶ್ನೆ ಸ್ಫರ್ಧೆ ವಿಜೇತ ಅರ್ಜುನ್ ಪಟೇಲ್ ಗೆ ಬಹುಮಾನ
|
ಕವನ ವಾಚನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹತ್ತನೇ ತರಗತಿ ಸಿದ್ದೇಶ, ರವಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಅರ್ಜುನ್ ಪಟೇಲ್, ಬಸವರಾಜು ಮೊದಲಾದವರು ಪದಕಕ್ಕೆ ಕೊರಳೊಡ್ಡಿ ಸಂಭ್ರಮಿಸಿದರು. ಉಳಿದವರು ಚಪ್ಪಾಳೆ ತಟ್ಟಿ ಖುಷಿಪಟ್ಟರು.
 |
ಬಹುಮಾನ ಪಡೆಯುತ್ತಿರುವ ರವಿ
|
 |
ಬಹುಮಾನ ಪಡೆಯುತ್ತಿರುವ ಸಿದ್ದೇಶ್ |
 |
ಬಸವರಾಜ್ ನಲ್ಲೂ ಬಹುಮಾನದ ಪುಳಕ |
ಇದೊಂದು ಹೆಜ್ಜೆಯಷ್ಟೇ. ಇದೇ ದಾರಿಯಲ್ಲಿ ಸಾಗಬೇಕೆಂಬುದಕ್ಕೆ ದಾರಿದೀಪವಿದೆ.
ದೀಪ ಹಿಡಿದು|ತಾಪ ತಣಿದು|ಪ್ರತಾಪ ಮರೆಯಲಿ.|ಮಕ್ಕಳಲ್ಲಿನ ಸೃಜನಶೀಲತೆ ಕುಡಿಯೊಡೆದು ಮೂಡಲಿ ಎಂದು ನೀವೆಲ್ಲಾ ಆಶೀರ್ವದಿಸಿ....ಧನ್ಯವಾದಗಳು. (ಓದಿದ ಮೇಲೆ ನಿಮ್ಮ ಸಲಹೆ-ಸೂಚನೆ-ಕಿವಿಯಿಂಡುವ ಕೆಲಸ ಮಾಡಿ ಗೆಳೆಯರೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ