ಈ ದಿನ ನಮ್ ಸ್ಕೂಲ್ ನಲ್ಲಿ ಮತ್ತೊಂದು ಸಡಗರ. ಮೊದಲಿಗೆ ಕನ್ನಡ ರಾಜ್ಯೋತ್ಸವ. ನಂತರ ಕನಕದಾಸ ಜಯಂತಿ ಮತ್ತು ಮಕ್ಕಳ ದಿನಾಚರಣೆ. ಶಾಲೆ ಎಂದಿನಂತೆ ಆರಂಭವಾಯಿತು. ಪ್ರಾರ್ಥನೆಗು ಮುನ್ನ ತಾಯಿ ಭುವನೇಶ್ವರಿಯ ಧ್ವಜಾರೋಹಣ ನೆರವೇರಿತು. ಉಪಪ್ರಾಂಶುಪಾಲರಾದ ಪ್ರಶಾಂತ್ ಧ್ವಜಾರೋಹಣ ಮಾಡಿದರು. ಟಿ.ಎನ್.ಶಿವರಾಂ ದೈಹಿಕ ಶಿಕ್ಷಕರ ಜವಬ್ದಾರಿ ನಿರ್ವಹಿಸಿದರು.
 |
ಹಾರುತಿಹುದು ಏರುತಿಹುದು ನೋಡಿ ನಮ್ಮ ಬಾವುಟ... |
ಬಳಿಕ ಪ್ರಾರ್ಥನೆ ನೆರವೇರಿತು. ಎಂದಿನಂತೆ ತರಗತಿಗಳು ಆರಂಭವಾದವು. ಎರಡು ಪೀರಿಯಡ್ ಆದ ಮೇಲೆ ಕಾರ್ಯಕ್ರಮ ಶುರುವಾಗುವುದು ನಿಗದಿಯಾಗಿತ್ತು. ಹಾಗೇ ತರಗತಿಗಳು ನಡೆದವು. ನಮ್ಮೂರಿನ ಶ್ರೀ ಸಜ್ಜನ ಮೋಕ್ಷಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಗಮಿಸಿದರು. ಶುರುವಾಯಿತು ಕಾರ್ಯಕ್ರಮ. .
 |
ಭಕ್ತಿಕುಸುಮಾಂಜಲಿ
|
ಕನ್ನಡಾಂಬೆ, ಚಾಚಾಜಿ ಮತ್ತು ಕನಕದಾಸರ ಚಿತ್ರಪಟಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 |
ಪ್ರೀತಿಯ ಪುಷ್ಪಾಂಜಲಿ |
ಕಾರ್ಯಕ್ರಮದ ಆರಂಭ ನಮ್ ಮಕ್ಕಳು ಒಂದು ಸುಂದರ ಭುವನೇಶ್ವರಿ ಗೀತೆ ಮೂಲಕ ಆರಂಭವಾಯಿತು. ನಮ್ ಸಂಗೀತ ಮೇಷ್ಟ್ರು ಮೋಹನ್ ಮಾಧುಸಾ ಮೇರ್ವಾಡೆ ತುಂಬ ಚೆನ್ನಾಗಿ ತಯಾರಿ ಮಾಡಿದ್ರು. ಬಳಿಕ ನಿರೂಪಕರಾಗಿ ಟಿ.ಎನ್.ಶಿವರಾಂ ರಂಗಪ್ರವೇಶ. ಕಾರ್ಯಕ್ರಮಕ್ಕೆ ಕಳೆ. ಎಲ್ಲರನ್ನು ಪ್ರೀತಿಯಿಂದ ಚಿಕ್ಕದಾಗಿ ಚೊಕ್ಕದಾಗಿ ಸ್ವಾಗತಿಸಿದವರು ವಿಜ್ಞಾನ ಶಿಕ್ಷಕಿಯಾದ ಅಶ್ವಿನಿರವರು. ಆಮೇಲೆ, ಭಾಷಾ ಶಿಕ್ಷಕರಾದ ಉಮೇಶ್ ರವರು ಕನ್ನಡ-ಕನ್ನಡತನ-ಕನ್ನಡಿಗರ ಮನಸ್ಸನ್ನು ತೆರೆದಿಟ್ಟರು. ರಾಜ್ಯೋತ್ಸವದ ಅವಶ್ಯಕತೆ ಮುಂದಿಟ್ಟರು. ಹಾಗೆ ಕನಕದಾಸರನ್ನು ಸ್ಮರಿಸಿದರು. ಅವರ ಆದರ್ಶವನ್ನು ಅನುಸರಿಸುವಂತೆ ಕರೆಕೊಟ್ಟರು. ತದನಂತರ ಬಂದವರು ಕಲಾಶಿಕ್ಷಕರಾದ ಫಕೀರ್ ಸಾಬ್. ಚಾಚಾ ಅವರ ಇತಿಹಾಸಕ್ಕೆ ಕನ್ನಡಿ ಹಿಡಿದ ಇವರು ಭವ್ಯ ಭಾರತದ ಕನಸಿಗೆ ಚಾಚಾಜಿ ನೀರೆರೆದ ಪರಿಯನ್ನು ಪರಿ ಪರಿಯಾಗಿ ಬಿಡಿಸಿಟ್ಟರು.
 |
ಉಮೇಶ್ ರವರ ಭಾಷಣ |
 |
ಫಕೀರ್ ಸಾಬ್ ಮಾತನಾಡುತ್ತಿರುವುದು
ನಂತರ ಶ್ರೀಗಳ ಆಶೀರ್ವಚನ. `ತ್ರಿವೇಣಿ ಸಂಗಮದಂತಿರುವ ಕಾರ್ಯಕ್ರಮ' ಎಂದೇ ಮಾತರಂಭೀಸಿದ ಅವರು `ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದರು. ಮಮ್ಮಿ-ಡ್ಯಾಡಿ ಸಂಸ್ಕೃತಿ ಬಿಟ್ಟು ಅಪ್ಪ- ಅವ್ವ ಸತ್ಕೃತಿ ಬೆಳೆಸಿಕೊಳ್ಳಿ ಅಂದರು. ನಂತರ ಮಕ್ಕಳ ದಿನಾಚರಣೆಗಾಗಿ ಮೇಷ್ಟ್ರುಗಳೇಲ್ಲಾ ಸೇರಿ ವಿವಿಧ ಸ್ಪರ್ಧೆ ಆಯೋಜಿಸಿದ್ದರು. ಅದನ್ನು ನೆನಪಿಸಿಕೊಳ್ಳಲಾಯಿತು. ಬಹುಮಾನ ವಿತರಣೆ ನಡೆಯಿತು. ಎಸ್.ಡಿ.ಎಂ.ಸಿ ಸದಸ್ಯರಾದ ಕುಮಾರ್, ಅಂಬಿಕ,,ಜಯಸ್ವಾಮಿ, ಶಿವಣ್ಣ ಇವರೂ ಜೊತೆಗೂಡಿ ಬಹುಮಾನ ವಿತರಿಸಿದರು. |
 |
ಚಮಚದಲ್ಲಿ ನಿಂಬೇಹಣ್ಣನ್ನು ಹಿಡಿದು ನಡೆಯುವುದು |
 |
ನಿಧಾನಗತಿಯ ಬೈಸಿಕಲ್ ಸ್ಪರ್ಧೆ |
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ನಮ್ ಸ್ಕೂಲ್ ಸೀನಿಯರ್ಸ್ ಆದ ಜನಾರ್ದನ್, ಧರ್ಮಪಾಲ್, ಮಹದೇವಯ್ಯ, ಮತ್ತು ಶಾರದ ರವರು ಮತ್ತು ಕಾಲೇಜು ವಿಭಾಗದ ಹಿರಿಯ ಉಪನ್ಯಾಸಕಾರದ ಜಗನ್ನಾಥ್ ರಾವ್ ಜೋಷಿ, ಖಲೀಲುಲ್ಲಾಖಾನ್, ಕುಮಾರ್, ಶೈಲಜ ಮೇಂ ರವರೆಲ್ಲರೂ ಭಾಗವಹಿಸಿದರು. ಎಲ್ಲರಿಗೂ ವಂದಿಸಿದವರು ಉಪಪ್ರಾಂಶುಪಾಲರಾದ ಎಂ.ಸಿ.ಪ್ರಶಾಂತ್ ರವರು. ಒಂದು ಹಾಡನ್ನು ಹೇಳಿ ಬೋರಾಗಿದ್ದ ಮಕ್ಕಳನ್ನು ರಂಜಿಸಿ ಕಾರ್ಯಕ್ರಮಕ್ಕೆ ಫುಲ್ ಸ್ಟಾಪ್ ಇಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ