ಪ್ರವಾಸ ಸಿಹಿವಾಸ

ಪ್ರವಾಸ ಎಂದಾಕ್ಷಣ, ಇನ್ನಿಲ್ಲದ ಸಂಭ್ರಮ - ಇನ್ನಿಲ್ಲದ ಚೈತನ್ಯ, ಮರೆಯಲಾಗದ ನೆನಪು-ಕಳೆಗುಂದಿಕೆಗೆ ಹೊಳಪು, ಗೆಳೆತನಕೆ ಬೆಳಗಿನ ಚಹಾ - ಹಗೆತನಕೆ ಹಸ್ತಲಾಘವ, ಮುಲಾಮು ನೋವಿಗೆ - ಸಲಾಮು ಪ್ರೀತಿಗೆ, ಬುದ್ಧಿಗೆ ಚುರುಕು - ಕಣ್ಣಿಗೆ ಸರಕು, ಸಂಬಂಧಗಳಿಗೆ ಬೆಸುಗೆ - ವಸಂತ ಬಂದಂತೆ ಮೈಮನಗಳಿಗೆ.....ಇನ್ನು ಮಕ್ಕಳಿಗೆ...? ಅದು ಪದಗಳಲ್ಲಿ ಹೇಳಲಾಗದ, ಈ ಕೈಗಳೀಗೆ ಬರೆಯಲಾಗದ, ಎಷ್ಟು ಹೇಳಿದರೂ ಸಾಲದ ಸಿಹಿವಾಸ. 
ದುರ್ಗದ ಬಾಗಿಲು ತೆರೆದಾಗ...
ಪ್ರತಿವರ್ಷ ಪ್ರವಾಸಕ್ಕೆ ಅಂತಾ ಒಂದು ದಿನ-ಹೀಗೆ ಹೋಗಿ ಹಾಗೆ ಬರೋದು-ಶಾಲೆಲಿ ವಾಡಿಕೆ ಆಗಿತ್ತು. ಆದ್ರೆ ವರ್ಷ ಮೂರು ದಿನ ಪ್ರವಾಸ ಹೋಗಿದ್ವಿ ಐವತ್ತೈದು ಮಕ್ಕಳಿದ್ರು. ಅವರ ಜೊತೆಗೆ ಸುಸ್ತಾಗದ ಮೇಷ್ಟ್ರುಗಳಿದ್ರು. ಜೇನುಗೂಡಿನ ಪಯಣವದು. 
ದುರ್ಗದ ವಿಹಂಗಮ ನೋಟ


ನಮ್ ರೂಟ್ ಮ್ಯಾಪ್ :
ರಾವಂದೂರು -ವಾಣಿವಿಲಾಸಸಾಗರ-ಚಿತ್ರದುರ್ಗ-ಕೋಟೆ-ಮುರುಘಮಠ-ಮರೆಯಲಾಗದ ಸಾಮ್ರಾಜ್ಯ(ಹಂಪಿ) - ಹುಲಿಗೆಮ್ಮ ಸನ್ನಿಧಿ - ಕೂಡಲಸಂಗಮ - ಐಹೊಳೆ - ಪಟ್ಟದಕಲ್ಲು - ಮಹಾಕೂಟ ಶಿವಯೋಗಿ ಮಂದಿರಬನಶಂಕರಿ ಬದಾಮಿ  ರಾವಂದೂರು.


 "ಸಾವಿರ ಪುಟಗಳ ಸಾರವನ್ನ ಒಂದು ಚಿತ್ರ ಹೇಳುತ್ತೆ" ಈ ಮಾತಿಗೆ ಗೌರವ ಕೊಡುವ ಇರಾದೆ ಇದು.
ಇತಿಹಾಸದ ಮೈ ಸವರುತ್ತಾ..

ವಿರೂಪಾಕ್ಷನ ಗುಡಿ ಕಡೆಗೆ

ಮಹಾನವಮಿ ದಿಬ್ಬದ ಬುನಾದಿ

ಸಾಸಿವೆ ಕಾಳುಗಣೇಶನ ಗುಡಿಯಲ್ಲಿ...

ಉಗ್ರನರಿಸಿಂಹನ ಮುಂದೆ ಶಾಂತಮೂರ್ತಿಗಳು

ಕಮಲಮಹಲ್ ಕಮಾಲ್ 

ಕಡಲೆಕಾಳು ಗಣಪನೊಡನೆ...

ದುರ್ಗಮ ಹಾದಿಯಿಂದಿಳಿದು...

ಒನಕೆ ಓಬವ್ನನ ಕಿಂಡಿ ಕಡೆಗೆ

ಕೇಳಿಸದೆ ಕಲ್ಲು ಕಲ್ಲಿನಲಿ...

`ಆನೆಗುಂದಿ'ಯಲ್ಲಿ ಆನಂದಪರವಶರಾಗಿ

ಮುತ್ತುರತ್ನ ಮಾರುತ್ತಿದ್ದ ಸ್ಥಳ

ಎಲೆಕ್ಷ್ಟ್ರಿಕ್ ಕಾರಲ್ಲಿ ಕಾರುಬಾರು

ಹರರೆ ಹಜಾರ ರಾಮಸ್ವಾಮಿ ಹಜಾರ

ಗೆಳೆಯರ ಗುಂಪು
ಸ್ವತಂತ್ರ ಹಕ್ಕಿಗಳ ಕಲರವ

ಗತವೈಭವಕ್ಕೆ ಕಿವಿಕೊಟ್ಟು...

ಕೂಡಲಸಂಗನ ಸನಿಹ

ಹುಲಿಗೆಮ್ಮನ ಬಾಗಿಲಲ್ಲಿ ರಂಗೋಲಿ
ವಾಣಿವಿಲಾಸ ಸಾಗರದಲ್ಲಿ ಸಡಗರ

ಕೂಡಲಸಂಗನಲ್ಲಿ ನೇಸರ ಭುವಿಸಂಗದಲ್ಲಿ - ನೋಡಾನೇಸರ

ಮಲಪ್ರಭೆಯರೊಡಲಲ್ಲಿ ವಿಹಾರ 

ದೂರದಿಂದ ಕೂಡಲಸಂಗಮ

ಸಾಲಾಗಿ ಕಳುಹಿಸುತ್ತಾ ಅನುಭವಮಂಟಪಕೆ

ತಿಂಡಿ ರೆಡಿಯಾಗೋದ್ರೊಳಗೆ ಡ್ಯಾನ್ಸ್ ಡ್ಯಾನ್ಸ್

ಐಹೊಳೆಯಲ್ಲೂ...

ಪಿಟಿ ಮೇಷ್ಟ್ರ ಪ್ರೀತಿಪಾತ್ರರು

ಐಹೊಳೆಯಲ್ಲಿ ಗ್ರೂಪ್ ಸೆಷನ್ 


ವಿಪಿಯ ತಪಸ್ಸು ಮಕ್ಕಳ (ಶ್ರೇಯಸ್ಸಿಗೆ)

ಐಹೊಳೆಯ  ಹೈ ಸೊಬಗು

ಮಹಾಕೂಟದ ಮಹಾಸಂಭ್ರಮ

ಮಹಾಕೂಟ

18ತೋಳುಗಳ ನಾಟ್ಯೇಶ್ವರನ ಹಿನ್ನೆಲೆ-ಮುನ್ನೆಲೆ

ಒಂದೇ ಚಿತ್ರದಲ್ಲಿ ಭರತನ ನಾಟ್ಯಶಾಸ್ತ್ರದ ವಿವರಗಳ ಬಗ್ಗೆ ವಿವರ

ಬದಾಮಿಯ ಗುಹೆಗಳ ಇಣುಕು
ಕಲಬೇಡ..ಕೊಲಬೇಡ...ಎಂದವನ ಸಂಗಡ

ಜೊತೆಗಿರುವನು ಚಂದಿರ

ಸಿಹಿವಾಸದ ನೆನಪುಗಳಲ್ಲಿ ಮಿಂದು..

 ಅಕ್ಷರಗಳ ಅರವಳಿಕೆ ನೀಡದೆ, ಚಿತ್ರಗಳ ಚಿರಂತನ ನೆನಪು ಕಟ್ಟಿಕೊಡುವ   ಹಂಬಲ ನಮ್ಮದು. ಅದಕ್ಕಾಗಿ ನೆನಪಿನ ತೋರಣ ಕಟ್ಟಿದ್ದೀವಿ. ಈ ನೆನಪುಗಳೇ ನಮ್ಮ ಉಸಿರು. ನಿತ್ಯ ಇದು ಹಸಿರಾಗಿರಲಿ. ನಮ್ ಸ್ಕೂಲಿನ ಮಕ್ಕಳ ಮನಸ್ಸಲ್ಲಿ ಅಚ್ಚಳಿಯದ ಸಿಹಿ ಸಿಹಿ ನೆನಪುಗಳಾಗಿ ಉಳಿಯಲಿ. ಭವಿತವ್ಯದ ಬೆಳಕು ಇಲ್ಲಿಂದ ಮೂಡಲಿ.
ಪ್ರವಾಸ - ಇದು ಸಿಹಿವಾಸ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು