ವಿವೇಕ ನೆನಪು - 12-01-12
1893. ಭಾರತೀಯರಿಗೆ ಹೆಮ್ಮೆ ತಂದ ವರ್ಷ. “Sisters and Brothers of America” ಎಂಬ ಸಾಲುಗಳಲ್ಲೇ ಸ್ವಾಮಿ ವಿವೇಕಾ ನಂದರು ಜಗತ್ತನ್ನು ಗೆದ್ದರು.ಈ ಗೆಲುವು ನಮ್ಮ ಮಕ್ಕಳದ್ದು ಆಗಲಿ ಎಂಬುದು ನಮ್ಮ ಆಶಯ. ಹೀಗಾಗಿಯೇ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಶಾಲೆಯಲ್ಲಿ ಆಚರಿಸಿದೆವು. "All Power is Within you. you do anything everything" ಎಂಬ ಶಕ್ತಿ ಶಾಲಿ ಮಾತುಗಳು ವಿದ್ಯಾರ್ಥಿಗಳಲ್ಲಿ ಶಕ್ತಿಯ ಬೀಜ ಬಿತ್ತಿದವು. "ಶಕ್ತಿಯೇ ಜೀವನ. ದುರ್ಬಲತೆಯೇ ಮರಣ" ಎಂಬ ಸಂದೇಶ ನಮ್ ಅಂಗಳದಲ್ಲಿ ಅನುರಣಿಸಿತು. ಪರಿ ಪರಿಯಾಗಿ ವಿವೇಕಾನಂದರ ಬಗ್ಗೆ ನಮ್ಮ ಶಿಕ್ಷಕರು ಭಾಷಣ ಮಾಡಿದರು.
ಮತ್ತೊಬ್ಬ ವಿವೇಕಾನಂದ ಹುಟ್ಟುವುದು ಅಸತ್ಯ. ಆದರೆ ಅವರ ಸಂದೇಶ ಹುಟ್ಟಬೇಕು ನಿತ್ಯ. ಈ ದೇಶ, ಈ ಧರ್ಮ, ಈ ನೆಲ, ಈ ಜಲ, ಈ ಭಾಷೆಯ ರಕ್ಷಕರು ನಾವಾಗಬೇಕು. ಇದು ನಮ್ಮ ಶಿಕ್ಷಣದ ಸಾರ್ಥಕತೆಯಲ್ಲವೇ ? ವಿವೇಕಾನಂದರು ಇಂದಿನ ಯುವ ಜನತೆಯ ಆದರ್ಶ. ಪ್ರತಿಯೊಬ್ಬರಿಗೂ ಆಗಬೇಕು ಇವರ ಸ್ಪರ್ಶ. ಆಗ ಕ್ಷಣ ಕ್ಷಣವೂ ಎಲ್ಲರಲ್ಲೂ ಹರ್ಷ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ