ವರ್ಷದ ಹರ್ಷ

 ಯೂನಿಯನ್ ಡೇ ಮಾಡಬೇಕನ್ನೋದು ಬಹಳ ದಿನದ ಕನಸು. ಕಳೆದ 15 ವರ್ಷದಿಂದ ಶಾಲೆಯಲ್ಲಿ ವಾರ್ಷಿಕೋತ್ಸವ ಆಗಿರಲಿಲ್ಲ. ಹೆಚ್ಚಿಗೆ ಹೆಣ್ಣುಮಕ್ಕಳೇ ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋದರಿಂದ ವಾರ್ಷಿಕೋತ್ಸವ ದಶಕಗಳಿಂದ ಮರೀಚಿಕೆ ಆಗಿತ್ತು. ಹಿಂದೊಮ್ಮೆ ವಾರ್ಷಿಕೋತ್ಸವದ ಸಮಯ ಕತ್ತಲಲ್ಲಿ ಕಲ್ಲು ಹೊಡೆದ ಕಿಡಿಗೇಡಿಗಳಿಂದ  ಈ ಅವಸ್ಥೆ ಬೇರೂರಿತ್ತು. ಆದರೆ, ಈ ವರ್ಷವಾದರೂ ವಾರ್ಷಿಕೋತ್ಸವ ಆಚರಿಸಲೇಬೆಕೆಂದು ಈ ಮೊದಲೇ ಶಾಲೆ ಒಮ್ಮತದಿಂದ ಮನಸು ಮಾಡಿತ್ತು. ಅದಕ್ಕೆ ಮುಹೂರ್ತ ಕೂಡಿ ಬಂದದ್ದು, 27/01/2012 ರಂದು.
ದೀಪವು ನಿನ್ನದೇ...
ದೀಪವು ನಿನ್ನದೇ ಗಾಳಿಯೂ ನಿನ್ನದೇ..........ಎಂಬ ಕವಿ ವಾಣಿಯಂತೆ ತಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಲಿಂಗು ಸರ್ ರವರು  ಮತ್ತು ಮುರುಘಾ ಮಠದ ಶ್ರೀಗಳು ದೀಪದ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಎಲ್ಲ ಶಿಕ್ಷಕರಾದಿಯಾಗಿ ಒಂದೇ ಸಮವಸ್ತ್ರ ಧರಿಸಿದ್ದು ಒಗ್ಗಟ್ಟಿನ ಬಲ ಬಿಂಬಿಸಿತು. ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ  ಅವರು, ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. " ಎಸ್.ಎಸ್.ಎಲ್.ಸಿಯಲ್ಲಿ ಕಳೆದ ವರ್ಷ ಶೇ.100 ಫಲಿತಾಂಶ ನೀಡಿರುವ ಶಾಲೆ ಈ ವರ್ಷವೂ ಕೂಡ ಅದೇ ಫಲಿತಾಂಶ ಕಾಯ್ತು ಕೊಳ್ಳುವ ಮೂಲಕ, ಉತ್ತಮಶಾಲೆ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲಿ. ನಮ್ಮ ಸಮುದಾಯ ಇಷ್ಟು ಸಂಖ್ಯೆಯಲ್ಲಿ ಶಾಲೆಗೆ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ. ಇದು ಕೇವಲ ಯೂನಿಯನ್ ಡೇ ಗೆ ಮಾತ್ರ ಸೀಮಿತವಾಗದೇ, ಶಾಲೆಯ ಎಲ್ಲ ಅಭಿವೃದ್ಧಿ ಕೆಲಸಗಳಲ್ಲಿ ನಿಮ್ಮ ಸಹಕಾರ ಅಗತ್ಯ. ಉತ್ಸಾಹಿ ತರುಣ ಈ ಶಾಲೆಗೆ ಮುಖ್ಯಸ್ಥನಾಗಿ ಬಂದಿದ್ದಾರೆ. ಅವರಿಗೆ ನಿಮ್ಮ ಸಹಕಾರದ ಅಗತ್ಯವಿದೆ. ದೊಡ್ಡ ಇತಿಹಾಸವಿರುವ ಶಾಲೆ ಇದು. ನಮ್ಮ ಮಕ್ಕಳು ಈ ಕಾಲೇಜಿನ ಕಾಂಪೌಂಡ್ ದಾಟುತ್ತಿದ್ದಂತೆ ಪಬ್ಲಿಕ್ಸ್ ಆಗಿಬಿಡ್ತಾರೆ. ಆಗ ಈ ಶಾಲೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ತಾರೆ. ಅದು ಆಗಬಾರದು. ನೀವು ಓದಿ ಬೆಳೆದ, ನಿಮ್ಮ ಸರ್ಕಾರಿ ಶಾಲೆಗಳಿಗೆ ನಿಮ್ಮ ಶ್ರೀರಕ್ಷೆ ಇರಬೇಕು. ಕಳೆದ ಶೈಕ್ಷಣಿಕವ ವರ್ಷದಲ್ಲಿ ಶಾಲೆಯ ಸಾಧನೆ ಮೆಚ್ಚುವಂತಹುದ್ದು. ಸಂಗೀತವನ್ನು ಶುಶ್ರಾವ್ಯವಾಗಿ ಪ್ರಸ್ತುತ ಪಡಿಸುವ ಮಕ್ಕಳ ಪ್ರತಿಭೆ ಅಭಿನಂದನೀಯ........" ಎಂದು ಹೇಳಿದರು. 
ನಮ್ ಮಕ್ಕಳ ಸಂಗೀತ ಸುಧೆ.
ಮಕ್ಕಳ ಹಾಡಿನ ಮೋಡಿಗೆ ಮನದುಂಬಿ ಹೊಗಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಗೀತವನ್ನು ಹೆಚ್ಚು ಅಭ್ಯಾಸ ಮಾಡುವಂತೆ ಕಿವಿ ಮಾತು ಹೇಳಿದರು. ನಮ್ಮೂರ ಮಠದ ಶ್ರೀಗಳಾದ ಮೊಕ್ಷಪತಿ ಮುರುಘರಾಜೇಂದ್ರ ಶರಣರ ಸೂಳ್ನುಡಿಗಳ ಮೂಲಕ ಆಶೀರ್ವಚನ ನೀಡಿದರು. 



ಬಳಿಕ ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಗಣಿತ ವಿಷಯದಲ್ಹೆಲಿ ಚ್ಚು ಅಂಕ ಪಡೆದ  ಶ್ವೇತಾಳಿಗೆ 10 ಸಾವಿರ ಚೆಕ್ ನೀಡಿ ಗೌರವಸಿಸಲಾಯಿತು. 



 ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆ ಶೇ.100 ರ ಸಾಧನೆಗೆ ಶ್ರಮಿಸಿದ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ನ ನವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎಸ್.ಡಿ.ಎಂ.ಸಿ ಸದಸ್ಯರು, ಶ್ರೀಗಳು, ನೂರಾರು ಪೋಷಕ ವೃಂದ  ಈ ಸಂಬ್ರಮಕ್ಕೆ ಸಾಕ್ಷಿಯಾಯಿತು.

ನೆನಪಿನ ನೌಕೆ
ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮದ ರಂಗೆದ್ದಿತು. ಹಲವು ನೃತ್ಯ, ನಾಟಕ, ಹಾಡು ಜನಮನಸೂರೆಗೊಂಡವು.


ಹುಡುಗರ ಜೊತೆ ನಮ್ ಶಾಲೆ ಸಂಗೀತ ಶಿಕ್ಷಕ ಮೇರ್ವಾಡೆ ಕೂಡ ಹೆಜ್ಜೆ ಹಾಕಿ ಎಲ್ಲರನ್ನು ಹುರಿದುಂಬಿಸಿದರು.


ಕ್ರಮದ ಕೇಂದ್ರಬಿಂದುವಾಗಿ ನಾವು ಸುವರ್ಣವಾಹಿನಿಯ "ಹಳ್ಳಿಹೈದ ಪ್ಯಾಟೆಗ್ ಬಂದ " ಖ್ಯಾತಿಯ ರಾಜೇಶ್ ನನ್ನು ಕರೆದಿದ್ದೆವು. ಆದರೆ, ಆತನ ಮೊಂಡುತನ, ನಿರ್ದೇಶಕರ ಜೊತೆಗಿನ ವಿರಸ ನಮ್ ಶಾಲೆಗೆ ಅವನನ್ನು ಕರೆತರಲಿಲ್ಲ. ಕಡೆಗೆ, ಆ ಮುಗ್ದನನ್ನು ಚಲನಚಿತ್ರದ ಹೀರೋ ಮಾಡಿರುವ ನಿರ್ದೇಶಕ ರವಿ ಕಡೂರು ಕಾರ್ಯಕ್ರಮದ ಮಧ್ಯದಲ್ಲಿ ಬಂದರು. ಮುಂದಿನ ಬಾರಿ ಕರೆತರುವ ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಚಲನಚಿತ್ರ್ಯೋದ್ಯಮದ ಕಿರು ಮಾಹಿತಿ ನೀಡಿದರು.
ರವಿ ಕಡೂರಿಗೆ ಸನ್ಮಾನ
ಮಧ್ಯೆ ಮಧ್ಯೆ ಮಕ್ಕಳ ಮೋಹಕ ನೃತ್ಯ ಜೊತೆಗೆ ಸುಮಧುರ ಗಾನ ಮಂಜರಿ ಎಲ್ಲರನ್ನೂ ನಿಬ್ಬೆರಗು ಮಾಡಿತು. ನಮ್ ಹುಡುಗರೇನಾ ಇವರು ಎಂಬಂತೆ ಅವರ ಪ್ರತಿಭೆಗೆ ಮನದಣಿಯೆ ಮಣಿದರು.




ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಊರ ಸ್ನೇಹಿತರು ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 15 ವಸಂತಗಳ ಬಳಿಕ ಮತ್ತೆ ಶ್ರಾವಣ ಬಂದಂತಾಗಿತ್ತು. ನಮ್ಮೂರಿಗೆ, ನಮ್ ಕೇರಿಗೆ, ನಮ್ ಶಾಲೆಗೆ ಬಂತು ಶ್ರಾವಣ....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು