ಹನ್ನೆರಡು-ಹದಿಮೂರು(12-13) : ಸವಾಲುಗಳು ನೂರಾರು

 ಬಾಗಿಲೊಳು ಕೈ ಮುಗಿದು ಒಳಗೆ ಬಾ  ವಿದ್ಯಾರ್ಥಿ ಬರಿ ಕೊಠಡಿಯಲ್ಲ ಇದು, ನಿಮ್ಮ ಭವ್ಯ ಭವಿಷ್ಯ ರಚನೆಯ ದೇಗುಲ.....ಎನ್ನುತ್ತಲೇ ವಿದ್ಯಾರ್ಥಿಗಳನ್ನು ಸ್ವಾಗತಿಸಿದೆವು ನಾವು. ಮೊದಲ ದಿನ ಎಲ್ಲರ ಕುಶಲೋಪರಿ. ರಜೆ ಮಜೆಯ ಸವಾರಿ, ಸಾಗಿತ್ತು. ಶಾಲೆ ಹೊಸ ಬಟ್ಟೆ ತೊಟ್ಟು ಕಂಗೊಳಿಸಿದ್ದನ್ನು ವಿದ್ಯಾರ್ಥಿಗಳು ಕಣ್ತುಂಬಿಸಿಕೊಂಡರು.

 ಹೊಸ ಕನಸುಗಳನ್ನ ಹೊತ್ತಿ ಎಲ್ಲ ಬಂದೆವು. ಆದರೆ ಹೊಸ ಸವಾಲುಗಳು ಜೊತೆಗೆ ಬಂದವು. ಪ್ರಮುಖವಾಗಿ ಶಿಕ್ಷಕರ ಕೊರತೆ. ಶಾಲೆಗೆ ಶ್ರಮಿಸುತ್ತಿದ್ದ ಶಿಕ್ಷಕರು ಹೊರಗೆ ಅಡಿಯಿಟ್ಟಿ ಆಗಿತ್ತು. ರಜೆಯಲ್ಲೇ ವರ್ಗಾವಣೆ ನಡೆದಿತ್ತು.  ಅವರೆಲ್ಲ ತಮ್ಮೂರ ಹತ್ತಿರ ಹೋಗುವ ಭರದಲ್ಲಿದ್ದರು. ಆದರೆ ನಾ ಅವರನ್ನು ಕಳುಹಿಸಲು ಹಿಂದೆಟು ಹಾಕುತ್ತಿದ್ದೆ. ಕಡೆಗೆ, ನನ್ನ ಏಳ್ಗೆಗೆ ಶ್ರಮಿಸಿದ ಅವರನ್ನು ಅವರ ಏಳ್ಗೆಗೂ ಬಿಡಬೇಕೆಂದು ತಿಳಿದು ಬಿಟ್ಟು ಕೊಡಲು ಮನಸು ಮಾಡಿದೆ.

ಊಟ ಸಖತ್ತಾಗದೆ....
ಈ ಸವಾಲಿನ ಜೊತೆಗೆ ಅಕ್ಷರ ದಾಸೋಹದ ಹೊಣೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರೆಲ್ಲ ಒಕ್ಕೊರಲಿನಿಂದ ದಾಸೋಹಕ್ಕೆ ಸಿದ್ಧರಾದರು. ಒಳ್ಳೆ ಬೆಳವಣಿಗೆ. ಆದರೆ ಅವರಿಗೆ ಮುಂದಾಗಲಿದ್ದ ತೊಡಕುಗಳ ತಿಳಿವಿರಲಿಲ್ಲ.  ಕಷ್ಟ ಕಾರ್ಪಣ್ಯಗಳ ಮಧ್ಯೆಯೂ, ಶಾಲೆಯಲ್ಲಿ ಒಲೆ ಹೊತ್ತಿತ್ತು. ಅನ್ನ ಬೆಂದಿತು. ಮಕ್ಕಳ ಹೊಟ್ಟೆ ತುಂಬಿತು. ಎಲ್ಲರಲ್ಲೂ ನೆಮ್ಮದಿ ನಿಟ್ಟುಸಿರು.

ಬೇಗ ಊಟ ಬಡಿಸಿ...
ಮಕ್ಕಳೆಲ್ಲ ತಾವು ತಂದಿದ್ದ ಊಟದ ಡಬ್ರಿಯನ್ನು ಬ್ಯಾಗಲ್ಲಿ ಇಟ್ಟು. ಎಲ್ಲರೂ ನಾ ಮುಂದು ತಾ ಮುಂದು ಎಂದು ಊಟಕ್ಕೆ ಅಣಿಯಾದರು.  ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಕಾಣದ ಉತ್ಸಾಹ ಇಂದಿನ ದಿನ ಇತ್ತು. ಎಸ್ . ಡಿ. ಎಂ.ಸಿ ಅಧ್ಯಕ್ಷರಾದ ನಾಗರಾಜೇಗೌಡರು ತುಂಬ ಸಹಕಾರ ನೀಡಿದರು. ಎಲ್ಲರ ಸಹಕಾರ ಶಿಕ್ಷಕರ ಶ್ರಮ ಬಿಸಿಯೂಟ  ವರ್ಷದ  ಆರಂಭದಲ್ಲೇ ಶುರುವಾಯಿತು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು