ಶೇಕಡಾ 93

ಕಳೆದ ವರ್ಷ ಎಸ್. ಎಸ್. ಎಲ್.ಸಿ ಫಲಿತಾಂಶ ಶೇಕಡಾ 100. ಆದರೆ ಈ ವರ್ಷ ಫಲಿತಾಂಶ ಸ್ವಲ್ಪ ಹಿನ್ನಡೆ.  ಕಾರಣಗಳು ಹಲವು. ಕಾರಣ ಕೊಡುವುದು ಸಮಂಜಸವಲ್ಲ. ನೂರಕ್ಕೆ ನೂರು ಬರಬೇಕೆಂಬುದು ನಮ್ಮ ಬಯಕೆ. ಆದರೆ, ಎಲ್ಲ ವರ್ಷವೂ ಅದು ಈಡೇರುವುದಿಲ್ಲ.  ಆ ಮಾತು ಅತ್ತ ಇರಲಿ. ಬಂದ ಫಲಿತಾಂಶದ ಪಕ್ಷಿನೋಟ ಇಲ್ಲಿ ನೋಡೋಣ.


ಪರೀಕ್ಷೆಗೆ ಕುಳಿತವರು             ಪಾಸಾದವರು           ಒಟ್ಟು ಫಲಿತಾಂಶ
ಗಂಡು  ಹೆಣ್ಣು                      ಗಂಡು    ಹೆಣ್ಣು             93%
43        62                         40         57             

 ಶಾಲೆಗೆ ಅತಿ ಹೆಚ್ಚು ಅಂಕವನ್ನ ಭೋಗನಹಳ್ಳಿಯ ಹುಡುಗಿ ಚಂದನ ಬಿ.ಎಸ್. 508 ಅಂಕಗಳೊಂದಿಗೆ ಪಡೆದರೆ, ಮತ್ತೋರ್ವಳು ಅನುಷಾ ಸಿ.ಎಂ. 503 ಅಂಕಗಳೊಂದಿಗೆ ದ್ವಿತೀಯ ಸ್ತಾನ ಪಡೆದಳು. ಹಿಂದಿನ ವರ್ಷದಂತೆ ಈ ವರ್ಷವೂ ಹೆಣ್ಣುಮಕ್ಕಳೇ ಫಲಿತಾಂಶದಲ್ಲಿ ಮೊದಲಿಗರಾದರು. ಇನ್ನು 502 ಅಂಕ ಪಡೆದ ಎನ್.ಶೆಟ್ಟಹಳ್ಳಿ ಹುಡುಗ ಬಸವರಾಜು.ಆರ್ ಹುಡುಗರಲ್ಲಿ ಮೊದಲಿಗ. ನಮ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ರಾವಂದೂರಿನ ರವಿ ಮಾತ್ರ ಹಿನ್ನಡೆ ಅನುಭಿಸಿದ. ಆದರೂ ಆತ ಇವರೆಲ್ಲರಿಗೂ ಜ್ಞಾನದಲ್ಲಿ ಮಿಗಿಲಿಗ ಅಂತ ಹೇಳೋಕೆ ನಮ್ಮ ಬಳಗಕ್ಕೆ ಇನ್ನಿಲ್ಲದ ಖುಷಿ.

ಹಾಗೆಯೇ ವಿಷಯವಾರು ಫಲಿತಾಂಶ ಹೀಗಿತ್ತು.

ಕನ್ನಡ      ಇಂಗ್ಲೀಷ್     ಹಿಂದಿ     ಸಮಾಜ ವಿಜ್ಞಾನ       ವಿಜ್ಞಾನ     ಗಣಿತ
95.2%    100%        94.3%         92.4%             98%      99%

ನಮ್ ಶಾಲೆಯ ಅನುಷಾ 123 ಅಂಕಗಳೊಂದಿಗೆ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದರೆ 97 ಅಂಕಗಳಲ್ಲಿ ಸಮಾಜ ವಿಜ್ಞಾನದ ಅತಿ ಹೆಚ್ಚು ಅಂಕ ಪಡೆದವನು ಶಿಕ್ಷಕರ ಪ್ರೀತಿಯ ರವಿ. ಅಂತೂ ಮತ್ತೆ ನಾನು ತಲೆ ಎತ್ತಿ ನಿಲ್ಲುವಂತೆ ಮಾಡಿದ ಎಲ್ಲ ನನ್ನ ಪ್ರೀತಿಯ ವಿದ್ಯಾರ್ಥಿ ಗೆಳೆಯರಿಗೆ, ಶಿಕ್ಷಕ ಸ್ನೇಹಿತರಿಗೆ, ಶಾಲೆಯ ಉಪಪ್ರಾಂಶುಪಾಲರಿಗೆ ಎಲ್ಲರಿಗೂ ನಮ್ ಸ್ಕೂಲ್ ವತಿಯಿಂದ ಧನ್ಯವಾದಗಳು.


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು