ಶಾಲೆಗೂ ಹೊಸ ಬಟ್ಟೆ. ಮಕ್ಕಳಿಗೂ ಹೊಸ ಬಟ್ಟೆ. ಹೊಸ ಪುಸ್ತಕ. ಹೊಸ ಹುರುಪು. ಶಿಕ್ಷಕರಲ್ಲೂ. ಈ ಮೊದಲೇ ಹೇಳಿದಂತೆ ಶಾಲೆಯ ಹೊಸ್ತಿಲಿಂದ ಹೊರಗೆ ಕಾಲಿಟ್ಟಿರುವ ಶಿಕ್ಷಕರನ್ನು ಕಳುಹಿಸಿಕೊಡುವುದೇ ನಮಗೆ ವೇದನೆ ವಿಷಯವಾಗಿತ್ತು. ಆದರೂ ಅವರು ಹೋಗಲೇ ಬೇಕಿತ್ತು. ನಾವು ಕಳುಹಿಸಲೇಬೇಕಿತ್ತು. ಸರಿ. ಹೊಸ ಬಟ್ಟೆಯನ್ನ ನೀವೇ ವಿತರಿಸಿ ಎಂದಾಗ.....
 |
ನಿರ್ಗಮಿತ ಶಿಕ್ಷಕರಿಂದ ಬಟ್ಟೆ ವಿತರಣೆ
|
ಇನ್ನು, ಈ ಬಾರಿ ಪುಸ್ತಕ-ಬಟ್ಟೆ ವಿತರಣೆ ಜವಬ್ದಾರಿ ಹಿರಿಯ ಸಹಶಿಕ್ಷಕರಾದ ಧರ್ಮಪಾಲ್ ಮತ್ತು ಶ್ರೀಮತಿ ಶಾರದ ಅವರದ್ದು. ಅವರೂ ಕೂಡ ಹೊಸ ಬಟ್ಟೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿದರು.
 |
ಧರ್ಮಪಾಲ್ ರಿಂದ... |
 |
ಶ್ರೀಮತಿ ಶಾರದ ಅವರಿಂದ... |
ನಂತರ ಉಪಪ್ರಾಂಶುಪಾಲರೂ ಕೂಡ ಸರ್ಕಾರದಿಂದ ನೀಡುವ ಉಚಿತ ಸಮವಸ್ತ್ರವನ್ನು ನೀಡಿದರು. ಹೊಸ ಬಟ್ಟೆ ಸ್ವೀಕರಿಸಿದ ಮಕ್ಕಳ ಆನಂದಕ್ಕೆ ಪಾರವಿಲ್ಲ. ಹಬ್ಬದ ಸಡಗರ ಅವರಲ್ಲಿತ್ತು.
 |
ಉಪಪ್ರಾಂಶುಪಾಲರಿಂದ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ