ಪ್ರಕೃತಿ ದೇವೋ ಭವ :

ಪ್ರಕೃತಿಯೇ ನಿಜವಾದ ದೈವ. ಅದಿಲ್ಲದೇ ಈ ಜಗತ್ತಿಲ್ಲ. ಪ್ರಕೃತಿಯೇ ನಮ್ಮ ನಿಮ್ಮೆಲ್ಲರ ಆರಾಧ್ಯ. ಹಾಗಾಗಿ ಇಂದಿನ ತುರ್ತು ಇದೇ ಆಗಿದೆ. ಈ ಪರಿಸರಕ್ಕೆ ಒಂದು ದಿನ ಎಂದರೆ ಅದು ಸಂಕುಚಿತ , ಸೀಮಿತ. ಪರಿಸರದ ಕಾಳಜಿ ನಿತ್ಯ ಆಗಬೇಕು. ಅದು ನಮ್ಮ ಅಕ್ಷರ ಜ್ಞಾನದ ಜೊತೆ ಮೇಳೈಸಬೇಕು. ಈ ಅರಿವು ಮಕ್ಕಳಲ್ಲಿ ಮೂಡಿಸುವ ಕಾಯಕ ನಿತ್ಯ ತರಗತಿಯೊಳಗೆ ನಡೆಯುತ್ತಿರುತ್ತದೆ. ಆದರೆ, ಅದಕ್ಕೊಂದು ದಿನ ಹಬ್ಬ ಮಾಡಿದೆವು. ಅದುವೇ ಪರಿಸರ ದಿನ-2013.
ಉಪಪ್ರಾಂಶುಪಾಲ ಪ್ರಶಾಂತ್ ಮತ್ತು ಸಹಶಿಕ್ಷಕರಾದ ಶಾರದ ಸಿಲ್ವರ್ ಸಸಿ ನೆಡುತ್ತಿರುವುದು

ಸಹಶಿಕ್ಷಕರಾದ ಯೋಗೀಶ್ ರವರು ತೇಗದ ಗಿಡ ನೆಟ್ಟರು

ಎಸ್.ಡಿ.ಎಂ.ಸಿ ಸದಸ್ಯರಾದ ಕುಮಾರ್, ಸಹಶಿಕ್ಷರಾದ ಮಹೇಶ್, ಧರ್ಮಪಾಲ್ ರಿಂದ ನೀರೆರೆದರು

ಎಸ್.ಡಿ.ಎಂ.ಸಿ ಸದಸ್ಯರಾದ ಅನ್ವರ್ ಪಾಷಾ, ಜಯಸ್ವಾಮಿ ಅವರೂ ಸಿಲ್ವರ್ ಗಿಡ ನೆಟ್ಟರು


ಪಿಟಿ ಮೇಷ್ಟ್ರಾದ ಮಹೇಶ್ ರವರು ಗಿಡ ನೆಟ್ಟು ಪೋಸ್ ಕೊಟ್ಟಿದ್ದು..


ಪ್ರತಿ ವರ್ಷದಂತೆ ಈ ವರ್ಷವೂ ಗಿಡ ನೆಟ್ಟಿದ್ದೇವೆ. ಇದು ಬೆಳೆದು ಹೆಮ್ಮರವಾಗಲಿ ಎಂಬುದು ನಮ್ಮ ಬಯಕೆ. ಅದಕ್ಕಾಗಿಯೇ ನಿತ್ಯ ಮಂತ್ರಿ ಮಂಡಲ ಜೊತೆಗೂಡಿ ಹಾರೈಕೆ ಮಾಡುತ್ತೇವೆ. ಆದರೆ, ಈ ಗಿಡಗಳನ್ನೂ ಮಂಗಮಾಯ ಮಾಡುವ ಕೈಗಳಿಗೆ ಕೈಮುಗಿದು ಬೇಡುತ್ತೆವೆ : " ಗಿಡ ಕೀಳಬೇಡಿ. ಭವಿಷ್ಯದ ಬೆಳಕು ಆರಿಸಬೇಡಿ" ಎಂದು. ಇದಕ್ಕಾಗಿಯೇ ನೆರೆ ಹೊರೆಯ ಕಾಲೋನಿಗಳಿಗೆ ಜಾಥಾ ಹೋಗಿಯೂ ಬಂದ್ದಿದ್ದೇವೆ. ಗಿಡ ಮರ ಉಳಿಸಿ. ಬೆಳೆಸಿ. " ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ"

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು